ವಚನ - 317     
 
ಮದನಾರಿಯೆಂಬ ಮಳೆ ಹೊಯ್ಯಲು, ಶಿವಯೋಗವೆಂಬ ತೊರೆ ಬರಲು, ಕಾಮನೆ ಅಂಬಿಗನಾದ ನೋಡಾ? ಕರ್ಮದ ಕಡಲೆನ್ನನೆಳದೊಯ್ವಾಗ ಕೈಯ ನೀಡು ತಂದೆ ಚೆನ್ನಮಲ್ಲಿಕಾರ್ಜುನಾ.