Index   ವಚನ - 3    Search  
 
ಮನವನೊಪ್ಪಿಸುವ ಠಾವಿನಲ್ಲಿ ಹೆಣ್ಣ ಬೇಡಿದಡೆ ನೋಯಲೇಕೆ? ಧನವನೊಪ್ಪಿಸುವ ಠಾವಿನಲ್ಲಿ ನಿಷ್ಠುರ ಬಂದಡೆ ತಾಳಬೇಕು. ತನುವನೊಪ್ಪಿಸುವ ಠಾವಿನಲ್ಲಿ ಅಸಿಯಲ್ಲಿ ಕುಸಿಕಿರಿದಡೆ ಹುಸಿಯೆನ್ನದಿರ್ದಡೆ ಇವೆಲ್ಲವೂ ಕಸರಜದ ಗುಣ, ಭಕ್ತಿಯ ಸತ್ವದ ನಿತ್ಯತ್ವವಿಲ್ಲೆಂದೆ, ಕಾಮಹರಪ್ರಿಯ ರಾಮನಾಥಾ.