ಹಾದರವನಾಡುವನೆ ಸದ್ಭಕ್ತ?
ಹಾದಿಯ ಕಟ್ಟುವನೆ ನಿಜಶರಣ?
ಹಸುಗೊಲೆಯ ಕೊಲುವನೆ
ಅಸುವಿನ ಕಲೆಯ ಬಲ್ಲವ?
ಇಂತಿವರ ನೀ ಬಲ್ಲೆ, ನಾನರಿಯೆ
ಕಾಮಹರಪ್ರಿಯ ರಾಮನಾಥಾ.
Art
Manuscript
Music
Courtesy:
Transliteration
Hādaravanāḍuvane sadbhakta?
Hādiya kaṭṭuvane nijaśaraṇa?
Hasugoleya koluvane
asuvina kaleya ballava?
Intivara nī balle, nānariye
kāmaharapriya rāmanāthā.