Index   ವಚನ - 7    Search  
 
ಹಸಿವು ಮುಂತಾಗಿ ಬಹಾತನ ಮನೆಯೊದವ ಬಲ್ಲನೆ? ವಿಷಯವಾವರಿಸಿದಾತ ಸ್ತುತಿ ನಿಂದ್ಯಾದಿಗಳ ಬಲ್ಲನೆ? ಖ್ಯಾತಿ ಲಾಭಕ್ಕೆ ಮಾಡುವಾತ ಭ್ರಾಂತಳಿದಿರಬಲ್ಲನೆ? ಇಂತಿವನರಿದು ಮಾಡುವ ಭಕ್ತರು ಆಪ್ಯಾಯನಕ್ಕೆ ಅನ್ನ ಆಶಕಂಗೆ ಹೊನ್ನು ವಿಷಯಾದಿಗೆ ಹೆಣ್ಣು ಇಚ್ಛೆಯನರಿದು ಒದಗಿದಲ್ಲಿ ಕೊಟ್ಟು ಈ ತ್ರಿವಧಕುಚಿತವೆಂದವರನರಿಯಬೇಕು ಕಾಮಹರಪ್ರಿಯ ರಾಮನಾಥಾ.