Index   ವಚನ - 11    Search  
 
ಕರೆವ ಹಸುವ ಉಳುವ ಬೆನ್ನತ್ತ ಮೊಲೆವುಂಬ ಕರುವ ಕುರುಹನರಿಯದೆ ಕಾಯಬಹುದೆ, ಈ ತ್ರಿವಿಧವಿಲ್ಲದೆ ಗುರುವಿನ ಇರವ ಲಿಂಗದ ಮೂರ್ತಿಧ್ಯಾನವ ಅರಿವಿನ ಮರೆದೊರಗುವ ಕಲೆಯ ಚಲನೆ ನಿಂದಲ್ಲಿ ಆತ್ಮಲಿಂಗ ಭೇದ, ಪ್ರಾಣ ಸಂಬಂಧವಪ್ಪುದು. ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಇದೇ ಪ್ರಮಾಣು.