Index   ವಚನ - 26    Search  
 
ನೆವದಿಂದ ಶರಣರ ಬಾಗಿಲಲ್ಲಿ ಹೋಗಿ ಕಟ್ಟಿದ ಹಸು ಕೂಡಿದ ಎತ್ತು ಬಿಡಿರೊ ಎಂದು ಕೂಗುತ್ತಿದ್ದೇನೆ. ಎನ್ನ ಕೂಗಿನ ದನಿಯಿಂದ ಮಹಾಶರಣರ ಸತಿ ಬಂದು ಕಟ್ಟಿದ ಹಸುವ ಬಿಟ್ಟು, ಕೂಡಿದ ಎತ್ತ ಕಡಹಿ ನಾಳೆ ಕೊಡಿಯೆಂದು ಹೊಡೆವುತ್ತಿದ್ದೇನೆ ಗೋಪತಿನಾಥ ವಿಶ್ವೇಶ್ವರಲಿಂಗದಡಿಗಾಗಿ.