Index   ವಚನ - 31    Search  
 
ಭಾವವುಳ್ಳನ್ನಕ್ಕ ಭ್ರಮೆಯ ಬೀಜ. ಭ್ರಮೆ ನಿಭ್ರಮೆಯಹನ್ನಕ್ಕ ಪೂಜೆಯ ದೃಷ್ಟ. ಪುಣ್ಯದ ಬೀಜ ಸುಖದ ಬೆಳೆ ಸಾಧನ ಸಂಪತ್ತು. ಇಂತೀ ಕ್ರೀ ಸಾಧ್ಯವಹನ್ನಕ್ಕ ಅಸಾಧ್ಯದ ಸಂಬಂಧ. ವಿರಳ ಅವಿರಳವೆಂಬ ಕಲೆ ಕಳೆಯಲ್ಲಿ ಕಲೆದೋರದೆ ನಿಂದುದು ಗೋಪತಿನಾಥ ವಿಶ್ವೇಶ್ವರಲಿಂಗವು ವಿಶ್ವನಾಮ ನಷ್ಟವಾದ ಭೇದ.