ಮೂರು ಬೆಟ್ಟದ ತಪ್ಪಲಿನ ಮಧ್ಯದಲ್ಲಿ
ಆಡುವ ಹಿಡಿದು ಮೇಯಿಸುತ್ತಿರಲಾಗಿ,
ಅಡ್ಡ ಬೆಟ್ಟದಲ್ಲಿ ದೊಡ್ಡಹುಲಿ ಹುಟ್ಟಿ ಹಾಯಿತ್ತು ಹಸುವ;
ಉದ್ದಿಹ ಬೆಟ್ಟದಲ್ಲಿ ಭದ್ರಗಜ ಬಂದು ಹೊಯ್ಯಿತ್ತು ಎತ್ತ;
ಮಧ್ಯದ ಬೆಟ್ಟದಲ್ಲಿ ಹುಟ್ಟಿದ
ತೋಳ ಹಿಡಿಯಿತ್ತು ಕರುವಿನ ಕೊರಳ
ಹುಲಿ ಗಜ ತೋಳನ ಉಡು ನುಂಗಿತ್ತ ಕಂಡೆ
ಗೋಪತಿನಾಥ ವಿಶ್ವೇಶ್ವರಲಿಂಗವನರಿಯಲಾಗಿ.