Index   ವಚನ - 34    Search  
 
ಶಕ್ತಿ ಸಮೇತವಾಗಿ ಇಹನ್ನಕ್ಕ ಬಿಂದುವಿನ ಸತ್ವ ಕೂಟಸ್ಥಬಿಂದು ಜಾರಿದಲ್ಲಿ ನಿಂದಿತ್ತು ಸತ್ವ ಅರಿವು ಮುಖದಿಂದ ಕ್ರಿಯಾಶಕ್ತಿಯ ಕೂಟ ಅರಿವು ಜಾರಿದಲ್ಲಿ ಮರೆದು ಹೋಯಿತ್ತು ಕ್ರಿಯಾಭೇದ. ನಾನರಿವುದಕ್ಕೆ ಅರಿವ ತೋರು ನೋಡುವುದಕ್ಕೆ ಕುರುಹ ತೋರು ನಾನಡುಗುವುದಕ್ಕೆ ಗುಡಿಯ ತೋರು ಗೋಪತಿನಾಥ ವಿಶ್ವೇಶ್ವರಲಿಂಗಾ.