Index   ವಚನ - 33    Search  
 
ವರ್ತುಳ ವಾಯುವಲ್ಲಿ ಎದ್ದ ತೃಣ ಪರ್ಣ ಕುಂಪಟಿ ಮುಂತಾದವನೆಲ್ಲವನು ದಂಡ ಸಾಕಾರ ಮುಂತಾಗಿ ತೋರಿ ಸಂಚಾರ ನಿಂದ ಮತ್ತೆ ಅವು ಮುನ್ನಿನ ಸಂಚದಂತೆ ನಿಂದವು. ನಿರವಯ ವಸ್ತುವನೊಡಗೂಡಿದ ಕ್ರೀವಸ್ತು ವಸ್ತುಕವಾಗಲಾಗಿ ಮುಂಚಿ ಮುಟ್ಟುವ ಕ್ರೀ ಮುನ್ನಿನ ಸಂಚದಲ್ಲಿಯೆ ಅಡಗಿದವು. ಇದು ಕ್ರೀಜ್ಞಾನ ನಿರ್ವಾಹ ಭಾವ ಗೋಪತಿನಾಥ ವಿಶ್ವೇಶ್ವರಲಿಂಗವು ನಿರ್ವಾಹನಾದ ಆಟ.