ಬ್ರಹ್ಮಾಂಡಕೋಟಿಗಳುರುಳಿ ಬೀಳುವಲ್ಲಿ
ಕಾಕೆಯ ಹಣ್ಣೆಂದು ಒಬ್ಬ ಮೆಲಿದನಾ ಶರಣನು.
ಮುಗಿಲ ಮುಟ್ಟುವವನ ಉದ್ದವ ನೋಡಿರೆ!
ಗಗನವ ನುಂಗುವವನ
ಬಾಯಗಲವ ನೋಡಿರೆ!! ಎಂಬಂತೆ
ಇಂತಪ್ಪ ಶರಣರು ತೆಲುಗೇಶ್ವರಾ ನಿಮ್ಮವರು.
Art
Manuscript
Music
Courtesy:
Transliteration
Brahmāṇḍakōṭigaḷuruḷi bīḷuvalli
kākeya haṇṇendu obba melidanā śaraṇanu.
Mugila muṭṭuvavana uddava nōḍire!
Gaganava nuṅguvavana
bāyagalava nōḍire!! Embante
intappa śaraṇaru telugēśvarā nim'mavaru.