Index   ವಚನ - 5    Search  
 
ಧರೆ ಗಿರಿಯನಂಬರವ ಖರಕಿರಣನ ಪ್ರಭೆಯ, ಸುರಿವ ಮಳೆ ಉರಿವಗ್ನಿ ಮಾರುತನನು, ಹರಿವಿರಂಚಿಗಳ ಕುಬೇರ ಇಂದ್ರ ಚಂದ್ರಾಮರರನು, ಹರನು ಹಡದಲ್ಲಿ ನೆರವಾದವರೊಳರೆ? ಕರಕಷ್ಟದ ಮಾನವರು ಪರಪುಟ್ಟದ ಮರಿಯಂತೆ ಹರನ ದಾನವನುಂಡು ಬೇರೆ ಪರದೈವವುಂಟೆಂದು ಬೆಸಕೈವರು. ಎರಡೇಳು ಲೋಕಕ್ಕೆ ಪರಮಪ್ರಭು ತೆಲುಗೇಶ್ವರನೊಬ್ಬನೇ ಎಂದೆನ್ನದವನ ಬಾಯಲ್ಲಿ ಪಾಕುಳ.