Index   ವಚನ - 35    Search  
 
ಸ್ಥಾವರ ಜಂಗಮಾತ್ಮಕಂಗಳ ಲಯ ಗಮನಂಗಳಿಗೆ ಆಧಾರವಾಗಿ ನಿರ್ಮಲವಾಗಿ, ಸ್ಥಿರವಾಗಿ, ಸರ್ವಸರ್ವಜ್ಞ ಸರ್ವಾತ್ಮಕ ನಿರ್ವಿಕಾರ ನಿತ್ಯಾತ್ಮಕನಾದ ಪರಮಾತ್ಮಲಿಂಗವು, ``ಪರಂ ಗೂಢಂ ಶರೀರರಸ್ಥಂ ಲಿಂಗಕ್ಷೇತ್ರಮನಾದಿವತ್| ಯಥಾದಿಮೀಶ್ವರಂ ತೇಜಂ ತಲ್ಲಿಂಗಂ ಪಂಚಸಂಜ್ಞಕಂ||' ಎಂಬ ಪಂಚಸಂಜ್ಞೆಯನೊಳಕೊಂಡು ``ಆಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ, ಅಣುವಿಂಗಣು ಮಹತ್ತಕ್ಕೆ ಮಹತ್ತಾಗಿಪ್ಪ ಮಹಾಲಿಂಗದ ನಿಲುಕಡೆ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.