ಸೂರ್ಯನಿಂದ ತೋರಿದ ಕಿರಣಂಗಳಿಗೂ
ಆ ಸೂರ್ಯನಿಗೂ ಭಿನ್ನವುಂಟೇ?
ಚಂದ್ರನಿಂದ ತೋರಿದ ಕಲೆಗೆ ಆ ಚಂದ್ರನಿಗೂ ಭಿನ್ನವುಂಟೇ?
ಅಗ್ನಿಯಿಂದ ತೋರಿದ ಕಾಂತಿಗೂ ಆ ಅಗ್ನಿಗೂ ಭಿನ್ನವುಂಟೇ?
ಜ್ಯೋತಿಯಿಂದ ತೋರಿದ ಬೆಳಗಿಗೂ ಆ ಜ್ಯೋತಿಗೂ ಭಿನ್ನವುಂಟೇ?
ಆಗಮ್ಯ, ಅಗೋಚರ, ಅಪ್ರಮಾಣ, ಅಪ್ರತಿಮ ಮಹಾಲಿಂಗದಲ್ಲಿ
ಜ್ಯೋತಿಯಿಂದ ಜ್ಯೋತಿ ಉದಯಿಸಿದಂತೆ ಉದಯಿಸಿದ
ಶರಣಂಗೂ ಆ ಮಹಾಲಿಂಗಕ್ಕೂ ಭಿನ್ನವುಂಟೇ?
ಇದ ಬೇರೆಂಬ ಅರೆಮರುಳುಗಳನೇನೆಂಬೆನಯ್ಯ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Sūryaninda tōrida kiraṇaṅgaḷigū
ā sūryanigū bhinnavuṇṭē?
Candraninda tōrida kalege ā candranigū bhinnavuṇṭē?
Agniyinda tōrida kāntigū ā agnigū bhinnavuṇṭē?
Jyōtiyinda tōrida beḷagigū ā jyōtigū bhinnavuṇṭē?
Āgamya, agōcara, apramāṇa, apratima mahāliṅgadalli
jyōtiyinda jyōti udayisidante udayisida
śaraṇaṅgū ā mahāliṅgakkū bhinnavuṇṭē?
Ida bēremba aremaruḷugaḷanēnembenayya
mahāliṅgaguru śivasid'dhēśvara prabhuvē.