Index   ವಚನ - 44    Search  
 
ಸತ್ಯ 'ಜ್ಞಾನಮನಂತ ಬ್ರಹ್ಮ'ವೆಂಬ ಸತ್ತು ಚಿತ್ತಾನಂದ ನಿತ್ಯಪರಿಪೂರ್ಣನಪ್ಪ ಪರಶಿವನ ಚಿತ್ಪ್ರಾಣಶಕ್ತಿಯಿಂದ ಪರಮ ಜ್ಞಾನಶಕ್ತಿ ಉದಯಿಸಿದಳು ನೋಡಾ. ಆ ಪರಿಪೂರ್ಣಪ್ರಕಾಶ ಜ್ಯೋತಿರ್ಮಯ ಚಿದಗ್ನಿಸ್ವರೂಪವನುಳ್ಳ, ಸಮ್ಯಜ್ಞಾನದಲ್ಲಿ, ಶರಣನ ಉತ್ಪತ್ತಿ, ಶರಣನ ಸ್ಥಿತಿ, ಶರಣನ ಲಯ ಕಾಣಿಭೋ. ಆ ಸದಮಲಾನಂದ ಚಿದ್ಬ್ರಹ್ಮಾಂಡಾತ್ಮಕ ತಾನೆಂಬುದನು ಶ್ರೀಗುರುವಿನ ಮುಖದಿಂದ ಅರಿದು ನಿಶ್ಚಯಿಸಿದ ಬಳಿಕ ತಾನೆ ನಿರಂತರ ನಿತ್ಯಮುಕ್ತನು; ಅನಾದಿ ಕೇವಲ ಮುಕ್ತನು; ಶುದ್ಧ ನಿಃಕಲ ನಿರವಯ ನಿರಾಮಯನು ನೋಡಾ ಶರಣನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.