ಆದಿಪರಮೇಶ್ವರನು ತನ್ನ ವಿನೋದಾರ್ಥ ಕಾರಣ ಶರಣನಾಗಿ ತೋರಿದರೆ,
ಭೇದವ ಮಾಡಿ ನುಡಿವ ವಾದಿಗಳ ಬಾಯಲ್ಲಿ ಕೆರಹನಿಕ್ಕುವೆನು.
ಅನಾದಿ ಪರಶಿವನು ತಾನೆ ಶರಣನೆಂಬ ವಾಕ್ಯ ಸತ್ಯ ಕಂಡಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Ādiparamēśvaranu tanna vinōdārtha kāraṇa śaraṇanāgi tōridare,
bhēdava māḍi nuḍiva vādigaḷa bāyalli kerahanikkuvenu.
Anādi paraśivanu tāne śaraṇanemba vākya satya kaṇḍayyā,
mahāliṅgaguru śivasid'dhēśvara prabhuvē.