Index   ವಚನ - 53    Search  
 
ಅನಾದಿ ಪರಶಿವತತ್ವದಿಂದ ಚಿತ್ತು ಉದಯವಾಯಿತ್ತು. ಆ ನಿರ್ಮಲಮಹಾಜ್ಞಾನಚಿತ್‍ಸ್ವರೂಪವೇ ಬಸವಣ್ಣ ನೋಡಾ. ಆ ಬಸವಣ್ಣನಿಂದ ನಾದ ಬಿಂದು ಕಳೆ. ಆ ನಾದ ಬಿಂದು ಕಳೆ ಸಮರಸವಾಗಿ ಅಖಂಡಪರಿಪೂರ್ಣಗೋಳಕಾಕಾರ ತೇಜೋಮೂರ್ತಿ ಲಿಂಗಸ್ವರೂಪವಾಯಿತ್ತು ನೋಡಾ. ಆ ಮಹಾಲಿಂಗದ ಪಂಚಸಾದಾಖ್ಯಮೂರ್ತಿ ಉತ್ಪತ್ತಿಯಾಯಿತ್ತು ನೋಡಾ ಇದು ಕಾರಣ, ಅನಾದಿಶರಣ ಆದಿಲಿಂಗವೆಂದೆ, ಬಸವಣ್ಣನಿಂದ ಲಿಂಗವಾದ ಕಾರಣ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.