ಹೃದಯಕಮಲ ಕರ್ಣಿಕಾವಾಸದಲ್ಲಿ
ದಿಟಪುಟಜ್ಞಾನ ಉದಯವಾಗಿ ಧಿಕ್ಕರಿಸಲಾಗಿ,
ಸಟೆ ದೂರವಾಗಿ ವಿವರ್ಜಿತವಾದವು ನೋಡಾ.
ಕುಟಿಲ ಕುಹಕ ಆಟಮಟ ಅಭ್ರಚ್ಛಾಯವಳಿದು ಹೋಗದ ಮುನ್ನ,
ಸ್ಫಟಿಕ ಪ್ರಜ್ವಲಾಕಾರವಾಯಿತ್ತು ನೋಡಾ.
ಆ ಶಿವಜ್ಞಾನಪ್ರಭೆಯೊಳಗೆ ನಿಟಿಲ ಲೋಚನನೆಂಬ ನಿತ್ಯನ ಕಂಡು,
ಅದೇ ಎನ್ನ ನಿಜವೆಂದು ಬೆರಸಿ ಅಭಿನ್ನ ಸುಖಿಯಾಗಿರ್ದೆನಯ್ಯ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Hr̥dayakamala karṇikāvāsadalli
diṭapuṭajñāna udayavāgi dhikkarisalāgi,
saṭe dūravāgi vivarjitavādavu nōḍā.
Kuṭila kuhaka āṭamaṭa abhracchāyavaḷidu hōgada munna,
sphaṭika prajvalākāravāyittu nōḍā.
Ā śivajñānaprabheyoḷage niṭila lōcananemba nityana kaṇḍu,
adē enna nijavendu berasi abhinna sukhiyāgirdenayya
mahāliṅgaguru śivasid'dhēśvara prabhuvē.