ಸಮಸ್ತ ಲೋಕಾದಿ ಲೋಕಂಗಳಿಲ್ಲದಂದು
ಅನಾದಿ ಪರಶಿವ ನೀನೊರ್ಬನೆ ಇರ್ದೆಯಯ್ಯ.
ಆ ನಿರಕಾರ ಪರಶಿವನಿಂದ ನಾನುದಯವಾಗಿ,
ಮಾಯಾರಂಜನೆ ಹುಟ್ಟದ ಮುನ್ನ
ನಿರಂಜನನೆಂಬ ಗಣೇಶ್ವರನಾಗಿರ್ದೆನು.
ಜ್ಞಾನಾಜ್ಞಾನಗಳಿಲ್ಲದಂದು ಜ್ಞಾನಾನಂದನೆಂಬ ಗಣೇಶ್ವರನಾಗಿರ್ದೆನು.
ಈ ಶರೀರವಿಲ್ಲದಂದು ನಿರ್ಮಲನೆಂಬ ಗಣೇಶ್ವರನಾಗಿರ್ದೆನು.
ಬಸವ ಮೊದಲಾದ ಪ್ರಮಥರೆಲ್ಲರೂ ಪ್ರಸಾದವ ಎನ್ನಲ್ಲಿ ಸಂಬಂಧಿಸಿ,
ನಿನ್ನ ಕೃಪಾಪ್ರಸಾದವ ಎನ್ನಲ್ಲಿ ಮೂರ್ತಿಗೊಳಿಸಿ,
`ಇನ್ನಾವುದಕ್ಕೂ ಅಂಜಬೇಡ' ಎಂದು,
ನೀನು, ನಿನ್ನ ಪ್ರಮಥರು ಎನ್ನ ಆಜ್ಞಾಪಿಸಿ ಮರ್ತ್ಯಕ್ಕೆ ಕಳುಹಿದಿರಿಯಾಗಿ,
ಕಳುಹಿದ ಭೇದವ ಶಿವಜ್ಞಾನೋದಯದಿಂದ ಅರಿದು
ಸಿದ್ಧಲಿಂಗನೆಂಬ ನಾಮ
ಎನಗೆ ನಿನ್ನಿಂದ ಬಂದಿತ್ತೆಂಬುದ ಅರಿದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Samasta lōkādi lōkaṅgaḷilladandu
anādi paraśiva nīnorbane irdeyayya.
Ā nirakāra paraśivaninda nānudayavāgi,
māyāran̄jane huṭṭada munna
niran̄jananemba gaṇēśvaranāgirdenu.
Jñānājñānagaḷilladandu jñānānandanemba gaṇēśvaranāgirdenu.
Ī śarīravilladandu nirmalanemba gaṇēśvaranāgirdenu.
Basava modalāda pramatharellarū prasādava ennalli sambandhisi,
Ninna kr̥pāprasādava ennalli mūrtigoḷisi,
`innāvudakkū an̄jabēḍa' endu,
nīnu, ninna pramatharu enna ājñāpisi martyakke kaḷuhidiriyāgi,
kaḷuhida bhēdava śivajñānōdayadinda aridu
sid'dhaliṅganemba nāma
enage ninninda bandittembuda aridenu kāṇā
mahāliṅgaguru śivasid'dhēśvara prabhuvē.