Index   ವಚನ - 94    Search  
 
ಪುರುಷಾಮೃಗದ ಕೈಯಲ್ಲಿ, ಪರುಷವಿಪ್ಪುದ ಕಂಡೆನಯ್ಯ. ಪರುಷವ ಸೋಂಕದೆ ಪಶುವಾಗಿದೆ ನೋಡಾ! ಪುರುಷಾಮೃಗವನರಿದು ಪರುಷವ ಸಾಧನಮಾಡಬಲ್ಲ ಹಿರಿಯನಾರನೂ ಕಾಣೆ. ಕಸ್ತುರಿಯ ಮೃಗ ಬಂದು ಸುಳಿಯಲು ಪುರುಷಾಮೃಗವಳಿದು, ಪರುಷಸಾಧನವಾಗಿ, ಪರಃಪರವಾದುದೇನೆಂಬೆನಯ್ಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.