Index   ವಚನ - 95    Search  
 
ತಂದೆಯ ವಧುವ ತಂದು, ಮಗನಿಗೆ ಮದುವೆ ಮಾಡಿದೆ; ಮಗನ ಹೆಂಡತಿ ತಂದು, ಅವರಪ್ಪಗೆ ಮದುವೆ ಮಾಡಿದೆ; ಆದಿಪಿಂಡವೇ ಜೀವಪಿಂಡ; ಅತ್ತೆ ಸೊಸೆಯ ನೆರೆದಳು; ತಂದೆಮಕ್ಕಳಿಬ್ಬರೂ ಪರಾಂಗನೆಯ ನೆರೆದು, ಪರಾಪರವಸ್ತುವಾದುದನೇನೆಂಬೆನಯ್ಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.