Index   ವಚನ - 96    Search  
 
ಊರ ಮಧ್ಯದಲ್ಲಿ ಹುಟ್ಟಿದ ಕಿಚ್ಚು, ಮೇರುವೆಯ ಸುಟ್ಟಿತ್ತು ನೋಡಾ. ಕೇರಿಕೇರಿಯಲ್ಲಿ ಬೀದಿವರಿದು, ಅರಣ್ಯವನಾವರ್ತಿಸಿತ್ತು ನೋಡಾ. ಅರಣ್ಯದೊಳಗಿರ್ದ ಅಂಗನೆಯ ಮುಡಿ ಬೆಂದು, ಊರ ಹತ್ತಿದ ಕಿಚ್ಚು ಉಮಾಪತಿಯನಪ್ಪಲು ನಾರಿಪುರುಷರಳಿದು ಮಾರಾರಿಯೊಬ್ಬನೆ ಅದನು ನೋಡಿರೇ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.