Index   ವಚನ - 108    Search  
 
ದೇವಸ್ತ್ರೀಯರ ಸಂಗಕ್ಕೆ ಎಣಿಸುವದೆಲ್ಲ ಕಾಯಗುಣ ಕಾಣಿರಣ್ಣಾ. ಆವ ಹಾವಾದಡೇನು ವಿಷವೊಂದೇ ನೋಡಾ, ಮಾಯಿಕಕ್ಕೆ ದೇವತ್ವವುಂಟೇ ಮರುಳು ಮಾನವ? ಮಹಾದೇವನೇ ದೇವನಲ್ಲದೆ, ಅನಿತ್ಯವಾದ ಮಾಯಾ ಪ್ರಪಂಚು ನಿತ್ಯವಾದ ಶಿವನ ನೆನೆದರೆ ಕೆಡುವುದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.