Index   ವಚನ - 110    Search  
 
ಲಲನೆಯರ ನಟನೆಯೆಂಬ ಕುಟಿಲಕ್ಕೆ ಸಿಕ್ಕಿ, ಕೋಟಲೆಗೊಳದಿರಾ ಮರುಳು ಮಾನವ. ನಿಟಿಲತಟದಲ್ಲಿ ಮಠವ ಮಾಡಿಕೊಂಡು ನಿಶ್ಚಿಂತ ನಿರಾಳನಾಗಿರಾ. ಹುಸಿಯ ಮಾಯಾ ತಮಂಧಕೆ ದಿಟಪುಟ ದಿವಾಕರ ಎನ್ನೊಡೆಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.