Index   ವಚನ - 115    Search  
 
ಹೆಂಗಳೊಲವೆಂಬುದು ಅಂಗಜನ ಅರಮನೆ: ಭಂಗಂಬಡುತ್ತಿದ್ದಾರೆ ನೋಡಾ ತ್ರೈಜಗವೆಲ್ಲ! ಇದು ಕಾರಣ, ನಿಮ್ಮ ಶರಣರು ಲಿಂಗನೆನಹೆಂಬ ಕಿಚ್ಚ ಹಿಡಿಯಲು ಅಂಗಜನ ಅರಮನೆ ಉರಿದು, ಭವ ಹೆರೆಹಿಂಗಿತ್ತು ನೋಡಾ, ಇದೇ ಲಿಂಗದೊಲವು; ನಿಜೈಕ್ಯಪದ. ಉಳಿದವೆಲ್ಲಾ ಹುಸಿ ಭ್ರಮೆ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.