Index   ವಚನ - 117    Search  
 
ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಈ ಮೂರು ಮಲತ್ರಯಂಗಳು. ಒಂದು ಕೆಂಪಿನ ಮಲ; ಒಂದು ಬೆಳ್ಳಿನ ಮಲ; ಒಂದು ಕಪ್ಪಿನ ಮಲ. ಈ ಮೂರು ಪ್ರಕಾರದ ಮಲವ ಭುಂಜಿಸಿ, ಸಂಸಾರ ವಿಷಯ ಕೂಪವೆಂಬುವ ತಿಪ್ಪೆಯ ಗುಂಡಿಯ ನೀರಕುಡಿದು, ಮಾಯಾ ಮೋಹವೆಂಬ ಹಾಳುಗೇರಿಯ ಗೊಟ್ಟಿನಲ್ಲಿ ಬಿದ್ದು, ಸೂಕರನಂತಿಪ್ಪವರ ಎಂತು ಭಕ್ತರೆಂಬೆ? ಎಂತು ದೇವರೆಂಬೆನಯ್ಯ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.