Index   ವಚನ - 138    Search  
 
ಗಿರಿಯ ಮೇಲಣ ಕೋಡಗ, ಹಿರಿಯ ಮಾರಿಯ ನುಂಗಿತ್ತು ನೋಡಾ. ಹಿರಿಯ ಮಾರಿಯ ನುಂಗಿ ಅವಸ್ಥೆ ಅಡಗದೆ, ಎಪ್ಪತ್ತೈದು ಗ್ರಾಮವನೆಯಿದೆ ನುಂಗಿತ್ತು ನೋಡಾ. ದಶಗಮನಂಗಳ ಕೂಡಿ ವಿಶ್ವತೋ ಪಥದಲ್ಲಿ ನಡೆವುತಿಪ್ಪುದು ನೋಡಾ. ಒಂದು ಪಥವ ತಾನೆಂದೂ ಅರಿಯದು ನೋಡಾ. ತಾ ಬಂದಂದಿಂದ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.