ಮರ್ಕಟನ ತಲೆಯಲ್ಲಿ ಮಾಣಿಕವಿಪ್ಪುದ ಕಂಡೆನಯ್ಯ.
ಆ ಮರ್ಕಟನ ಹಿಡಿದು
ಮಾಣಿಕವ ತಕ್ಕೊಳ್ಳಲಾರಳವಲ್ಲ ನೋಡಾ!
ಆ ಮರ್ಕಟನ ಕೊಂದು ಮಾಣಿಕವ ತಕ್ಕೊಳ್ಳಬಲ್ಲಡೆ
ಮುಕ್ಕಣ್ಣ ಶಿವನೆಂದು ಬೇರುಂಟೆ ಹೇಳ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Markaṭana taleyalli māṇikavippuda kaṇḍenayya.
Ā markaṭana hiḍidu
māṇikava takkoḷḷalāraḷavalla nōḍā!
Ā markaṭana kondu māṇikava takkoḷḷaballaḍe
mukkaṇṇa śivanendu bēruṇṭe hēḷa,
mahāliṅgaguru śivasid'dhēśvara prabhuvē.