ಗುರು ಅಳಿದನು ಉಳಿದನು ಎಂದೆಂಬರಿ
ಗುರು ಅಳಿದರೆ ಜಗ ಉಳಿಯಬಲ್ಲುದೆ?
`ಸ್ಥಾವರಂ ಜಂಗಮಾಧಾರಂ ನಿರ್ಮಲಂ ಸ್ಥಿರಮೇವ ಚ|
ಜಗದ್ವಂದಿತಪಾದಾಯ ತಸ್ಮೈಶ್ರೀ ಗುರವೇ ನಮಃ||' ಎಂದುದಾಗಿ,
ಗುರು ಅಳಿವನೂ ಅಲ್ಲ; ಉಳಿವನೂ ಅಲ್ಲ.
ನಿಮ್ಮ ಭ್ರಾಂತಿಯೇ ಅಳಿದನು ಉಳಿದನು ಎಂದು
ಕುತ್ತಗೊಳಿಸುತ್ತಿದೆಯಲ್ಲಾ.
ಈ ವಿಕಾರದಲ್ಲಿ ಮುಳುಗಿದವನ ಶಿಷ್ಯನೆಂದೆಂಬೆನೆ? ಎನ್ನೆನಯ್ಯ.
ಗುರು ಸತ್ತನೆಂದು ಬಸುರ ಹೊಯಿಕೊಂಡು
ಬಾಯಿಬಡಿದುಕೊಡು ಅಳುತ್ತಿಪ್ಪ ದುಃಖ ಜೀವಿಗಳಿಗೆ
ಗುರುವಿಲ್ಲ; ಗುರುವಿಲ್ಲವಾಗಿ ಲಿಂಗವಿಲ್ಲ;
ಲಿಂಗವಿಲ್ಲವಾಗಿ ಜಂಗಮವಿಲ್ಲವಯ್ಯಾ.
ಈ ತ್ರಿವಿಧವೂ ಇಲ್ಲವಾಗಿ, ಪಾದೋದಕ ಪ್ರಸಾದವೂ ಇಲ್ಲವಯ್ಯ.
ಪಾದೋದಕ ಪ್ರಸಾದವಿಲ್ಲವಾಗಿ, ಮುಕ್ತಿಯೆಂಬುದು
ಎಂದೆಂದಿಗೂ ಇಲ್ಲವಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Guru aḷidanu uḷidanu endembari
guru aḷidare jaga uḷiyaballude?
`Sthāvaraṁ jaṅgamādhāraṁ nirmalaṁ sthiramēva ca|
jagadvanditapādāya tasmaiśrī guravē namaḥ||' endudāgi,
guru aḷivanū alla; uḷivanū alla.
Nim'ma bhrāntiyē aḷidanu uḷidanu endu
kuttagoḷisuttideyallā.
Ī vikāradalli muḷugidavana śiṣyanendembene? Ennenayya.
Guru sattanendu basura hoyikoṇḍu
Bāyibaḍidukoḍu aḷuttippa duḥkha jīvigaḷige
guruvilla; guruvillavāgi liṅgavilla;
liṅgavillavāgi jaṅgamavillavayyā.
Ī trividhavū illavāgi, pādōdaka prasādavū illavayya.
Pādōdaka prasādavillavāgi, muktiyembudu
endendigū illavayya,
mahāliṅgaguru śivasid'dhēśvara prabhuvē.