ಸದ್ಗುರುವಿನ ದೆಸೆಯಿಂದ ಆವನೋರ್ವನ ಕಿವಿಯಲ್ಲಿ
ಬ್ರಹ್ಮೋಪದೇಶವು ಹೇಳಲ್ಪಟ್ಟಿತ್ತು,
ಆ ಶಬ್ದವೇ ಬೀಜವೆನಿಸಿಕೊಂಡಿತ್ತಯ್ಯ.
ಅದು ಆವುದಯ್ಯ ಎಂದಡೆ:
ಶ್ರೀಗುರುವಿನ ದೆಸೆಯಿಂದ ಪಡೆದ ಶಿವಮಂತ್ರಾಕ್ಷರವೇ
ಬೀಜವೆನಿಸಿಕೊಂಡಿತ್ತಯ್ಯ.
ಅಂಥಾ ಪ್ರಾಣಿಯೆ ಜ್ಞಾನಕಾಯನೆನಿಸಿಕೊಂಬನಯ್ಯ.
ಶಿವಮಂತ್ರೋಪದೇಶವಿಲ್ಲದಾತನು
ಪ್ರಕೃತಿಕಾಯನೆನಿಸಿಕೊಂಬನಯ್ಯಾ.
ಇದು ಕಾರಣ, ಪ್ರಕೃತಿಕಾಯವೆಂದು ಜ್ಞಾನಕಾಯವೆಂದು
ಎರಡು ಭೇದವಾಗಿಪ್ಪುದಯ್ಯ.
ಶಿವಮಂತ್ರ ದೀಕ್ಷೋಪದೇಶವಾಗಲಾಗಿ,
ಪ್ರಕೃತಿಕಾಯ ಹೋಗಿ ಜ್ಞಾನಕಾಯವಪ್ಪುದು ತಪ್ಪದಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Sadguruvina deseyinda āvanōrvana kiviyalli
brahmōpadēśavu hēḷalpaṭṭittu,
ā śabdavē bījavenisikoṇḍittayya.
Adu āvudayya endaḍe:
Śrīguruvina deseyinda paḍeda śivamantrākṣaravē
bījavenisikoṇḍittayya.
Anthā prāṇiye jñānakāyanenisikombanayya.
Śivamantrōpadēśavilladātanu
prakr̥tikāyanenisikombanayyā.
Idu kāraṇa, prakr̥tikāyavendu jñānakāyavendu
eraḍu bhēdavāgippudayya.
Śivamantra dīkṣōpadēśavāgalāgi,
prakr̥tikāya hōgi jñānakāyavappudu tappadayya,
mahāliṅgaguru śivasid'dhēśvara prabhuvē.