Index   ವಚನ - 199    Search  
 
ಇದು ಕಾರಣ, ದೇವಗುರು ನಿರೂಪಿಸಿದ ಷಡಕ್ಷರಮಂತ್ರವನಗಲ್ದು ಹುಟ್ಟಿ ಸಾವ, ಕೆಡುವ ಮಂತ್ರತಂತ್ರಯಂತ್ರಾದಿಗಳ ಕಲಿತು ಬದುಕಿಹೆನೆಂಬ ಕಾಳ್ವಿಚಾರವ ಬಿಡು ಗಡಾ ಮನುಜರಿರಾ. ``ಓಂ ನಮಃ ಶಿವಾಯ ಇತಿ ಮಂತ್ರಸ್ಸರ್ವ ಮಂತ್ರಾಕ ಸ್ಥಾಪಯೇತ್" ಎಂಬ ಬಿರಿದು ಕಾಣಿರೋ. ಎಲ್ಲ ಮಂತ್ರಕ್ಕೂ ಶಿವಮಂತ್ರವೇ ಗುರುವೆಂದರಿಯದೆ, ಅನ್ಯನಾಮವಿಡಿದು ಬಳಲುವ ಅನಾಚಾರಿಗಳ ಕಂಡಡೆ ಎನ್ನ ಮನ ನಚ್ಚದು ಮಚ್ಚದಯ್ಯ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.