ಶಿವಶಿವಾಯೆಂಬುದು ಭವದುರಿತದೋಟ ಕಂಡಯ್ಯ.
ಹರಹರಯೆಂಬುದು ಹರಣದ ತೊಡಕಿನ ಮರಣವ
ಪರಿಹರಿಸುವುದು ನೋಡಾ. ಇದು ಕಾರಣ,
ನಡೆವುತ್ತ ನುಡಿವುತ್ತ ಸರ್ವಾವಸ್ಥೆಯಲ್ಲಿಯು
`ಓಂ ನಮಃಶಿವಾಯ ಓಂ ನಮಃಶಿವಾಯ ಓಂ ನಮಃಶಿವಾಯ'
ಎಂಬ ಪ್ರಣವ ಪಂಚಾಕ್ಷರಿಯನೆ ಸ್ಮರಿಸುತಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Śivaśivāyembudu bhavaduritadōṭa kaṇḍayya.
Haraharayembudu haraṇada toḍakina maraṇava
pariharisuvudu nōḍā. Idu kāraṇa,
naḍevutta nuḍivutta sarvāvastheyalliyu
`ōṁ namaḥśivāya ōṁ namaḥśivāya ōṁ namaḥśivāya'
emba praṇava pan̄cākṣariyane smarisutirdenu kāṇā,
mahāliṅgaguru śivasid'dhēśvara prabhuvē.