ಓಂಕಾರವೆ ನಾದಮಯ. ಓಂಕಾರವೆ ಮಂತ್ರಮಯ.
ಓಂಕಾರವೆ ಪರಿಪೂರ್ಣವಾಗಿ ಸರ್ವವ್ಯಾಪಕತ್ವವನ್ನುಳ್ಳುದು ನೋಡಾ.
ಪ್ರಣವವೆ ಪರಮಾತ್ಮ ಸ್ವರೂಪವಾಗಿ
ಪರಮೇಶ್ವರನ ಗೌಪ್ಯಮುಖ ನೋಡಾ.
ಪ್ರಣವವೆ ಶಿವಶರಣರ ಹೃದಯಾಧಿಪತಿ. ಇದು ಕಾರಣ,
ಹೃದಯಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ
ಪರಶಿವಧ್ಯಾನದಲ್ಲಿ ತರಹರವಾಗಿ ಪ್ರಣವಸ್ವರೂಪನಾಗಿದ್ದೆನಯ್ಯ.
ಪಂಚಾಕ್ಷರವೆ ಪಂಚಬ್ರಹ್ಮಮಯವಾಗಿ
ಆ ಪಂಚಾಕ್ಷರಿಮಂತ್ರವೆ ಶರೀರವಾಗಿರ್ದೆನು ಕಾಣಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Ōṅkārave nādamaya. Ōṅkārave mantramaya.
Ōṅkārave paripūrṇavāgi sarvavyāpakatvavannuḷḷudu nōḍā.
Praṇavave paramātma svarūpavāgi
paramēśvarana gaupyamukha nōḍā.
Praṇavave śivaśaraṇara hr̥dayādhipati. Idu kāraṇa,
hr̥dayakamala madhyadalli praṇavavanuccarisutta
paraśivadhyānadalli taraharavāgi praṇavasvarūpanāgiddenayya.
Pan̄cākṣarave pan̄cabrahmamayavāgi
ā pan̄cākṣarimantrave śarīravāgirdenu kāṇā,
mahāliṅgaguru śivasid'dhēśvara prabhuvē.