Index   ವಚನ - 207    Search  
 
ಪಂಚಾಕ್ಷರವೆ ಪಂಚಮುಖವಾಗಿ ಎನ್ನ ಪಂಚೇಂದ್ರಿಯಂಗಳಾಗಿಪ್ಪುವು ನೋಡಾ. ಪ್ರಣವವೆ ಪ್ರಾಣಮೂರ್ತಿಯಾಗಿರ್ದೆನಯ್ಯ. ಇದು ಕಾರಣ, ಪರತತ್ತ್ವ ಜ್ಞಾನಮಯವಾಗಿ ``ಓಂ ನಮಃಶಿವಾಯ' ಎಂಬ ಶಿವಷಡಕ್ಷರಮಂತ್ರವನೆ ಸ್ಮರಿಸಿ, ಭವಸಾಗರವ ದಾಂಟಿ ಭಕ್ತನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.