Index   ವಚನ - 221    Search  
 
ಆಯತಲಿಂಗದಲ್ಲಿ ಅಂಗಗುಣವಳಿದು ಸರ್ವಾಂಗವನು ಲಿಂಗನಿಷ್ಠೆಯಲ್ಲಿ ಘಟ್ಟಿಗೊಳಿಸಿ ಲಿಂಗಾಂಗಸಂಗದಲ್ಲಿ ನಿರತನು ನೋಡಾ. ಸ್ವಾಯತಲಿಂಗದಲ್ಲಿ ಮನ ವೇದ್ಯವಾಗಿ ಮನೋಮಾಯವನಳಿದ ನಿರ್ಮಾಯ ನಿರಾಕುಳನು ಮಾಯಾಪ್ರಪಂಚಿನೊಳಗೆ ಚರಿಸದ ಪ್ರಾಣಲಿಂಗನಿಷ್ಠನು ನೋಡಾ. ಸನ್ನಿಹಿತಲಿಂಗದಲ್ಲಿ ತನ್ನನಳಿದು ತಾನೆಂಬುವ ಭಾವವೇನೂ ತೋರದ ಮಹಾನುಭಾವಿಯ ನೋಡಾ. ತಾನೆಂಬುದೇನೂ ಇಲ್ಲವಾಗಿ, ನೀನೆಂಬುದು ಇಲ್ಲ; ನಾನು ನೀನೆಂಬುದು ಇಲ್ಲವಾಗಿ, ಲಿಂಗವೆ ಸರ್ವಮಯವಾಗಿಪ್ಪುದು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.