Index   ವಚನ - 235    Search  
 
ಗುರುಮುಖದಿಂದ ಕೊಂಬುದು ಶುದ್ಧಪ್ರಸಾದ. ಲಿಂಗಮುಖದಿಂದ ಕೊಂಬುದು ಸಿದ್ಧಪ್ರಸಾದ. ಜಂಗಮಮುಖದಿಂದ ಕೊಂಬುದು ಪ್ರಸಿದ್ಧ ಪ್ರಸಾದ. ಗುರುಪ್ರಸಾದದಿಂದ ಎನ್ನ ತನು ಶುದ್ಧವಾಯಿತ್ತು. ಲಿಂಗಪ್ರಸಾದದಿಂದ ಎನ್ನ ಮನ ಶುದ್ಧವಾಯಿತ್ತು. ಜಂಗಮಮುಖದಿಂದ ಎನ್ನ ಮನ ಶುದ್ಧವಾಯಿತ್ತು. ಜಂಗಮಪ್ರಸಾದದಿಂದ ಎನ್ನ ಪ್ರಾಣ ಶುದ್ಧವಾಯಿತ್ತು. ನಿಮ್ಮ ಪ್ರಸಾದದಿಂದ ಶುದ್ಧವಾಗದೆ ತನ್ನಿಂದ ತಾನೆ ಶುದ್ಧನಾದೆನೆಂಬ ವಾಗದ್ವೈತಿಯ ತೋರದಿರಾ. ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು ಲಿಂಗ ಪ್ರಸಾದವ ತಾ ಗ್ರಹಿಸುವದೆ ಆಚಾರ. ಹೀಂಗಲ್ಲದೆ, ಜಂಗಮ ಪ್ರಸಾದವ ಅಂಗಕ್ಕೆ ಕೊಡಬಹುದಲ್ಲದೆ ಲಿಂಗಕ್ಕೆ ಕೊಡಬಾರದೆಂಬ ಅನಾಚಾರಿಗೆ ನಾಯಕನರಕ ತಪ್ಪದು ಕಾಣಾ, ನೀ ಸಾಕ್ಷಿಯಾಗಿ ಎಲೆ ಶಿವನೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.