Index   ವಚನ - 259    Search  
 
ಎನಗೆ ಕಾಯುವುಂಟೆಂಬರು ಕಾಯವೆನಗಿಲ್ಲವಯ್ಯ. ಎನಗೆ ಜೀವವುಂಟೆಂಬರು ಎನಗೆ ಜೀವ ಮುನ್ನವೆ ಇಲ್ಲವಯ್ಯ. ಎನಗೆ ಭಾವವುಂಟೆಂಬರು ಎನಗೆ ಭಾವ ಮುನ್ನವೆ ಇಲ್ಲವಯ್ಯ. ಅದೇನು ಕಾರಣವೆಂದಡೆ: ಎನ್ನ ಕಾಯ ಜೀವ ಪ್ರಾಣನಾಯಕ ಪರಮೇಶ್ವರ ನೀನಾದ ಕಾರಣ. ಎನಗಿನ್ನಾವ ಭಯವೂ ಇಲ್ಲ ನೋಡಾ. ನಾನು ನಿರ್ಭಯನಾದ ಕಾರಣ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.