Index   ವಚನ - 261    Search  
 
ಆದಿಯಲ್ಲಿ ನಾ ಹುಟ್ಟುವಂದು ಎನ್ನ ಒಡಹುಟ್ಟಿದರೈವರು ನೋಡಾ. ಒಡಹುಟ್ಟಿದರೈವರು ಎನಗೆ ಒಡಲಾಗಿಪ್ಪರು ನೋಡಾ. ಒಡಲನುರಿಗಿತ್ತು ಎನ್ನ ನಿಮಗಿತ್ತು ನಿರ್ವಯಲಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.