Index   ವಚನ - 278    Search  
 
ಎನ್ನ ಕಾಯ ಕಾಮಾರಿಯಲ್ಲಿ ಸಾವಧಾನವಾಯಿತ್ತಾಗಿ ಕಾಯವೆನಗಿಲ್ಲ ನೋಡಾ. ಎನ್ನ ಮನ ಮಾಹೇಶ್ವರನಲ್ಲಿ ಸಾವಧಾನವಾಯಿತ್ತಾಗಿ ಮಾಯಾ ಪ್ರಪಂಚು ಹೆರೆದೆಗೆದೋಡಿತ್ತು ನೋಡಾ. ಎನ್ನ ಪ್ರಾಣ ಪರಮೇಶ್ವರನಲ್ಲಿ ಸಾವಧಾನವಾಯಿತ್ತಾಗಿ ಪ್ರಾಣಾದಿ ವಾಯುಗಳ ಪ್ರಪಂಚಿನ ಗಮನಾಗಮನ ನಾಸ್ತಿಯಾಯಿತ್ತು ನೋಡಾ. ಎನ್ನ ಭಾವ ಭವಹರನಲ್ಲಿ ಸಾವಧಾನವಾಯಿತ್ತಾಗಿ ಭಾವಭಾವಭ್ರಮೆಗಳು ಅಳಿದು ಹೋದುವು ನೋಡಾ. ಭಾವ ನಿಭಾರ್ವವಾಗಿ ಬ್ರಹ್ಮವ ಮುಟ್ಟಿತ್ತಾಗಿ ನಿನ್ನಯ ಪ್ರಸಾದ ಎನ್ನನೊಳಕೊಂಡಿತ್ತು ನೋಡಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.