Index   ವಚನ - 280    Search  
 
ಕಾಯ ಲಿಂಗಾರ್ಪಿತವಾದ ಬಳಿಕ ಕರ್ಮತ್ರಯಗಳು ಇರಲಾಗದು ನೋಡಾ. ಜೀವ ಲಿಂಗಾರ್ಪಿತವಾದ ಬಳಿಕ ಸಂಸಾರವ್ಯಾಪ್ತಿಯಹಂಥಾ ಜೀವನ ಗುಣವಿರಲಾಗದು. ಅದು ಅರ್ಪಿತವಲ್ಲ ನೋಡಾ. ಕರಣಂಗಳು ಲಿಂಗಾರ್ಪಿತವಾದ ಬಳಿಕ ಆ ಕರಣಂಗಳೆಲ್ಲವು ಲಿಂಗ ಕಿರಣಂಗಳಾಗಿ ಆ ಲಿಂಗ ಕಿರಣವೆ ಹರಣವಾಗಿರಬೇಕು ನೋಡಾ. ಕಾಯದ ಜೀವದ ಕರಣದ ಗುಣವ ಕಳೆಯದ ಲಿಂಗಾರ್ಪಿತ ಪ್ರಸಾದಿಗಳೆಂಬ ಪ್ರಪಂಚಿಗಳ ಮಚ್ಚನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.