Index   ವಚನ - 293    Search  
 
ಒಳಗಿಟ್ಟುಕೊಂಡು ನಡೆದರೂ ನಡೆಯಲಿ; ಅದಕೇನು? ಶಿವಶರಣರಿಗೆ ತಥ್ಯ ಮಿಥ್ಯ ಸಲುವುದೆ? ಸಲ್ಲದೆಂದುದಾಗಿ ಆದಿ-ವ್ಯಾಧಿ, ಸುಖ-ದುಃಖ, ಭಯ-ಮೋಹ, ಪುಣ್ಯ-ಪಾಪ, ಇಹ-ಪರವೆಂಬ ಉಪಾಧಿಯ ಹೊದ್ದದೆ ಆಚಾರ ಅನಾಚಾರವೆಂಬುದರಿಯದಿರ್ದಡೆ ಜಲದೊಳಗಣ ಸೂರ್ಯನಂತೆ ವಿಶ್ವಪ್ರಪಂಚ ಹೊದ್ದಿಯು ಹೊದ್ದದೆ ಬೆರಸಿಯು ಬೆರಸದೆ ಸರ್ವಸಾಕ್ಷಿಕನಾಗಿರಬಲ್ಲರೆ ಆತಂಗೆ ಸಲುವುದೀ ಮತ. ಆಚಾರದೆಡೆಯಲ್ಲಿ ಅನುಸರಣೆಯುಂಟೆ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.