Index   ವಚನ - 310    Search  
 
ತನುವ ಗುರುವಿಂಗೆ ಸವೆವುದು ಶೀಲ; ಮನವ ಲಿಂಗಕ್ಕೆ ಸವೆವುದು ಶೀಲ; ಧನವ ಜಂಗಮಕ್ಕೆ ಸವೆವುದು ಶೀಲ; ತನುವ ಗುರುವಿಂಬುಗೊಂಬುದು ಶೀಲ; ಮನವ ಲಿಂಗವಿಂಬುಗೊಂಬುದು ಶೀಲ; ಧನವ ಜಂಗಮವಿಂಬುಗೊಂಬುದು ಶೀಲ; ಈ ತನು ಮನ ಧನದಲ್ಲಿ ನಿರ್ವಂಚಕನು ಶೀಲವಂತನಲ್ಲದೆ ಕಚ್ಚಿದ ಬದ್ಧ ಭವಿಯ ಶೀಲವಂತನೆಂತೆಂಬೆನಯ್ಯ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ, ಮಾತಿನ ನೀತಿಯ ಶೀಲವಂತರ ಕಂಡು ಹೇಸಿತ್ತು ಮನ.