Index   ವಚನ - 312    Search  
 
ಒಡಲು ಉಮಾಪತಿಯಲ್ಲಿ ನಿಂದು ಮನವು ಮಾರಾರಿಯಲ್ಲಿ ಬಲಿದು ನಿಂದ ಕಾರಣ ತನುಮನದ ತಾಮಸದ ತವಕ ಮುರಿದೋಡಿತ್ತು ನೋಡಾ. ಜೀವ ಪ್ರಣವವನಪ್ಪಿ ಪರಮಾತ್ಮ ಸ್ವರೂಪು ಕೃತ ನಿಶ್ಚಯವಾಗಿ ಪ್ರಪಂಚ ತಲೆದೋರಲೀಯದು ನೋಡಾ. ಭಾವ ಬ್ರಹ್ಮವನಪ್ಪಿ ದೇಹ ಭಾವಂಗಳನೆಲ್ಲಾ ಕೊಡಹಿತ್ತು ನೋಡಾ. ದೇಹ ಮೋಹವಳಿದು ಸರ್ವಾಂಗವು ಲಿಂಗನಿಷ್ಠೆಯಲ್ಲಿ ಲೀಯವಾಯಿತ್ತು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.