Index   ವಚನ - 329    Search  
 
ಹಜಾರದ ಪೀಠದ ಮನೆಯಲ್ಲಿ ಭಜಕಜನವರೇಣ್ಯನಿದಾನೆ ನೋಡಾ. ಕುಜನ ಜನವಳಿದು ಸುಜನಜನಮುಖಸ್ಸರೋಜ ರಾಜಹಂಸನೆಂಬಾತ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ ತಾನೆ ಕಾಣಿರೋ.