Index   ವಚನ - 330    Search  
 
ಅಕ್ಷರವೆಂಬುದು ಲೆಕ್ಕದೊಳಗು; ಲೆಕ್ಕವೆಂಬುದು ನೆನಹಿನೊಳಗು; ಇವೆಲ್ಲಾ ಕಲ್ಪಿತದೊಳಗು. ಕಲ್ಪಿತವೆಂಬುದು ಖಂಡಿತ ನೋಡಾ ಅಖಂಡ ಪರಿಪೂರ್ಣ, ನಿರ್ವಿಕಲ್ಪ, ನಿತ್ಯಾತ್ಮಕನಾದ ಲಿಂಗೈಕ್ಯನ ಕಲ್ಪಿತಕ್ಕೆ ತಂದು ನುಡಿವ ಕರ್ಮಕಾಂಡಿಗಳನೇನೆಂಬೆನಯ್ಯ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.