ಆದಿಯಲ್ಲಿ ಈಶ್ವರನು ಕೂಗಿದ ಕೂಗ
ತ್ರೈಜಗವೆಲ್ಲಾ ಕೂಗುತ್ತಿದೆ ನೋಡಾ.
ಮುದಿಬಳ್ಳು ಕೂಗಿದ ಕೂಗ ಮರಿಬಳ್ಳುಗಳೆಲ್ಲ
ಬಳ್ಳಿಟ್ಟು ಬಗುಳುತ್ತಿಪ್ಪವು ನೋಡಾ.
ಮರಿಬಳ್ಳುಗಳು ಬಗುಳಿದ ಬಗುಳು
ಮುದಿಬಳ್ಳುವ ಮುಟ್ಟದಿದೇನು ಸೋಜಿಗವೋ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು
ವಾಙ್ಮನಕ್ಕಗೋಚರನಾದ ಕಾರಣ,
ಅವರ ನಡೆಯು ನುಡಿಯು ಮುಟ್ಟವು ಕಾಣಿರೋ.
Art
Manuscript
Music
Courtesy:
Transliteration
Ādiyalli īśvaranu kūgida kūga
traijagavellā kūguttide nōḍā.
Mudibaḷḷu kūgida kūga maribaḷḷugaḷella
baḷḷiṭṭu baguḷuttippavu nōḍā.
Maribaḷḷugaḷu baguḷida baguḷu
mudibaḷḷuva muṭṭadidēnu sōjigavō?
Mahāliṅgaguru śivasid'dhēśvara prabhu
vāṅmanakkagōcaranāda kāraṇa,
avara naḍeyu nuḍiyu muṭṭavu kāṇirō.
ಸ್ಥಲ -
ಪ್ರಾಣಲಿಂಗಿಸ್ಥಲದ ವಚನ