Index   ವಚನ - 354    Search  
 
ಈಚಲ ತಿಂದ ನರಿ ತನ್ನ ವಿಕಾರಕ್ಕೆ ಒರಲುವಂತೆ ಮಾತಿನ ಮಮಕಾರಕ್ಕೆ ಆಗಮವ ಬಲ್ಲೆವೆಂದು ಕೂಗಿಡುವರು ನೋಡಾ. ಆಗಮವತಿರಹಸ್ಯ. ಆಗಮ ಹೇಗಿಹುದೆಂಬುದ ಲೋಗರು ನೀವೆತ್ತ ಬಲ್ಲಿರಿ? ಆಗಮಮೂರ್ತಿ ಅನುಭಾವಿ ಬಲ್ಲ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ, ನಿಮ್ಮ ಶರಣರು ಬಲ್ಲರು.