Index   ವಚನ - 369    Search  
 
ಹಾರುವ ಹಕ್ಕಿಗೆ ಗರಿಯಿಲ್ಲ ನೋಡಾ. ಊರೊಳಗಿಪ್ಪ ಕಪಿಗೆ ತಲೆಯಿಲ್ಲ ನೋಡಾ. ಹಾರುವ ಹಕ್ಕಿಗೆ ಗರಿ ಬಂದು, ಊರೊಳಗಿಪ್ಪ ಕಪಿಗೆ ತಲೆ ಬಂದಲ್ಲದೆ ತಾನಾರೆಂಬುದನರಿಯಬಾರದು. ತನ್ನಾದಿಯ ಶಿವತತ್ವವ ಭೇದಿಸಲರಿಯದೆ, ವೇದಾಗಮ ಮುಖದಿಂದ ನಿಮ್ಮನರಿದೆನೆಂಬ ಆಜ್ಞಾನಿಗಳನೇನೆಂಬೆನಯ್ಯ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.