Index   ವಚನ - 382    Search  
 
ನೆಲನಿಲ್ಲದ ಭೂಮಿಯಲ್ಲಿ ಒಂದು ತಲೆ ಹುಟ್ಟಿ ತಲೆ ಹಲವು ಮುಖವಾಗಿದೆ. ಅದರ ನೆಲೆಯ ಬಲ್ಲ ಹಿರಿಯರನಾರನು ಕಾಣೆ ನೋಡಾ. ಹಲವು ಮುಖ ಹಾವಾಡಿಗನ ನುಂಗಲು ನೆಲನೆತ್ತ ಹೋಯಿತ್ತೆಂದರಿಯೆನಯ್ಯ. ಹಾವಾಡಿಗ ದೇವಾಡಿಗನೊಳಗಡಗಲು ಹಾವೆತ್ತ ಹೋದವೋ ದೇವ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.