ಸುರತರುವ ಬಿಟ್ಟು ಎಲವದ ಮರಕೆ ನೀರೆರೆವಂತೆ
ನೊರೆವಾಲ ಚಲ್ಲಿ ಕಾಟೆಯ ಬಯಸಿ ಬಾಯಾರುವಂತೆ
ತಾಯ ಮಾರಿ ತೊತ್ತ ಕೊಂಬವರಂತೆ
ರಂಭೆಯ ಬಿಟ್ಟು ಸಿಂಬೆಯ ಬಯಸುವ ಶಿಖಂಡಿಗಳಂತೆ,
ನಿತ್ಯವಲ್ಲದ ನಿರುತವಲ್ಲದ ಸತ್ತು ಹೋಹ
ಮಾಯಾಪ್ರಪಂಚ ಮಚ್ಚಿದ ಮನುಜರು
ಮುಕ್ತ್ಯಂಗನೆಯನಪ್ಪಿ ಭಕ್ತ್ಯಮೃತವ ಸೇವಿ[ಸುವ]ಸಿ
ನಿತ್ಯಪದದ ಸುಖವ ವ್ಯರ್ಥಕಾಯರಿವರೆತ್ತಬಲ್ಲರು ಹೇಳ?
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Surataruva biṭṭu elavada marake nīrerevante
norevāla calli kāṭeya bayasi bāyāruvante
tāya māri totta kombavarante
rambheya biṭṭu simbeya bayasuva śikhaṇḍigaḷante,
nityavallada nirutavallada sattu hōha
māyāprapan̄ca maccida manujaru
muktyaṅganeyanappi bhaktyamr̥tava sēvi[suva]si
nityapadada sukhava vyarthakāyarivarettaballaru hēḷa?
Mahāliṅgaguru śivasid'dhēśvara prabhuvē.